<ಶಿಶು ಸಾಹಿತ್ಯ 
ಆಕಳು ಕೊಡು ಕೃಷ್ಣಾ
ಮುಂಜಾನೆದ್ದು ನಾವೆಲ್ಲಾ 
ಆಕಳನೆಲ್ಲಾ ಹುಡುಕುತ ಬಂದು 
ಅಸ್ತಮಾನವಾಯಿತು 
ಆಕಳು ಕರೆಯುವ ಹೊತ್ತಾಯಿತು, 
ಆಕಳು ಕೊಡು ಕೃಷ್ಣಾ ನಮ್ಮ್ ಆಕಳು ಕೊಡು ಕೃಷ್ಣಾ ||೧||

ಹಳ್ಳ ದಂಡೆಲಿ ಮೇಯುತ್ತಿತ್ತು, 
ಕಳ್ಳಿ ಮರದಡಿ ನಿಂತಿತ್ತು 
ಕರುವಿಗೆ ಹಾಲನುಣಿಸುತ್ತಿತ್ತು 
ಮನೆಯ ದಾರಿ ಹಿಡಿಯುತಿತ್ತು, 
ಆಕಳು ಕೊಡು ಕೃಷ್ಣಾ ನಮ್ಮ್ ಆಕಳು ಕೊಡು ಕೃಷ್ಣಾ||೨||

ಹಳ್ಳ ದಂಡೆಲಿ ಮೇಯುದು ಕಾಣೆ 
ಕಳ್ಳಿ ಮರದಡಿ ನಿಂತಿದು ಕಾಣೆ  
ಕರುವಿಗೆ ಹಾಲನುಣಿಸುದು ಕಾಣೆ 
ಮನೆಯ ದಾರಿ ಹಿಡಿದುದು ಕಾಣೆ | 
ಆಕಳು ಕಾಣೆ ನಾ ನಿಮ್ಮ್ ಆಕಳು ಕಾಣೆನಾ, ||೩ ||

ಸಣ್ಣ ರೋಮದ ಆಕಳು ಕೃಷ್ಣ 
ಸರದ ಮುತ್ತಿನ ಮಲುಕು ಕೃಷ್ಣ, 
ಬೆನ್ನಲ್ಲಿ ಬೆಳುಪಿರುವುದು ಕೃಷ್ಣ, 
ಮನೆಯ ದಾರಿ ಹಿಡಿವುದು ಕೃಷ್ಣ || ಆಕಳು ಕೊಡು ಕೃಷ್ಣಾ||೪||

ಅರಸಿಗಾದರು ಹೇಳುತ್ತೇವೆ 
ಅಲ್ಲಿಗೆ ನಿನ್ನನು ಕರೆಸುತ್ತೇವೆ 
ಮಾಯಾಗಾರ ಕೃಷ್ಣ ನಿನ್ನ 
ಮಾಯಾ ಮಾಡಿ ಹೊಡೆಸುತ್ತೇವೆ|| ಆಕಳು ಕೊಡು ಕೃಷ್ಣಾ||೫||

ಯಾವ ಅರಸಿಗೆ ಹೇಳುತ್ತೀರ 
ಎಲ್ಲಿಗೆ ನನ್ನನು ಕರೆಸುತ್ತೀರ 
ಮಾಯಾಗಾರ್ತೀ ಹೆಣ್ಣುಗಳೇ 
ಮಾಯಾ ಮಾಡಿ ಹೊಡೆಸುತ್ತೀರಾ? || ಆಕಳು ಕಾಣೆನಾ ನಮ್ ಆಕಳು ಕಾಣೆನಾ||೬|| 

ಆಕಳನೆಲ್ಲ ತಂದು ಕೊಟ್ರೆ 
ಬೇಕಾದ್‍ಹಚ್ಚಡವನ್ನು ಕೊಡುವೆ 
ತುಪ್ಪದ ದೀಪಾ ಹಚ್ಚುವೆ 
ಕಲ್ಲು ಸಕ್ಕರೆ ಹಂಚುವೆ || ಆಕಳು ಕೊಡು ಕೃಷ್ಣಾ ನಮ್ಮ್ ಆಕಳು ಕೊಡು ಕೃಷ್ಣಾ||೭||

ಹೇಳಿದ ಮಾತಿಗೆ ತಪ್ಪದಿದ್ರೆ 
ಕೇಳಿದುದೆಲ್ಲ ಕೊಟ್ಟೇ ಬಿಟ್ರೆ 
ಬಿಟ್ಟೇ ನಿಮ್ಮಾ ಆಕಳ ಕೊಳ್ಳೀರಿ| ನಿಮ್ಮ ಆಕಳ  ಕೊಳ್ಳೀರಿ ---||೮||

ಆಕಳು ಬಂದಿತ್ತು--  ಮನೆಗೆ ಆಕಳು ಬಂದಿತ್ತು--.
ಆಕಳು ಬಂದಿತ್ತು --- ಮನೆಗೆ ಆಕಳು ಬಂದಿತ್ತು --||೯||
ಜಾನಪದ ಸಂಗ್ರಹ - ಅನಾಮಿಕ

ನೋಡಿ

ಉಲ್ಲೇಖ
ವರ್ಗ: ಶಿಶುಸಾಹಿತ್ಯ
ವರ್ಗ: ಕನ್ನಡ ಸಾಹಿತ್ಯ